ಸುಳ್ಯ: ಗ್ರಾ.ಪಂ. ಸದಸ್ಯೆಯನ್ನು ಸೇತುವೆಯಿಂದ ತಳ್ಳಿ ಹಾಕಿದ ನೆರೆಮನೆಯ ವ್ಯಕ್ತಿ! - News Ubaar

ಇತ್ತೀಚಿನ ಸುದ್ದಿ

Subscribe

ಗುರುವಾರ, ಸೆಪ್ಟೆಂಬರ್ 16, 2021

ಸುಳ್ಯ: ಗ್ರಾ.ಪಂ. ಸದಸ್ಯೆಯನ್ನು ಸೇತುವೆಯಿಂದ ತಳ್ಳಿ ಹಾಕಿದ ನೆರೆಮನೆಯ ವ್ಯಕ್ತಿ!

ನ್ಯೂಸ್ ಉಬಾರ್:
ಸುಳ್ಯ: ಗ್ರಾ.ಪಂ. ಸದಸ್ಯೆಯಾಗಿರುವ ಮಹಿಳೆಯನ್ನು ವ್ಯಕ್ತಿಯೋರ್ವ ಸೇತುವೆಯಿಂದ ನದಿಗೆ ತಳ್ಳಿ ಹಾಕಿದ ಘಟನೆಯೊಂದು ಚೆಂಬು ಗ್ರಾಮದಲ್ಲಿ ಸಂಭವಿಸಿದೆ.

ಸುಳ್ಯ ತಾಲೂಕಿನ ಅಂಚಿನಲ್ಲಿರುವ ಕೊಡಗಿನ ಚೆಂಬು ಗ್ರಾಮ ಪಂಚಾಯತ್‌ನ ಸದಸ್ಯೆ ದಬ್ಬಡ್ಕ ಕಮಲ ಎಂಬವರು ನಿನ್ನೆ ಸಂಜೆ ಇತರರೊಂದಿಗೆ ಹತ್ತಿರದ ಮನೆಯ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾಗ ದಬ್ಬಡ್ಕ ಸೇತುವೆ ಮೇಲೆ ನೆರೆ ಮನೆಯ ಮುತ್ತು ಎಂಬಾತ ಆಕೆಯನ್ನು ಸೇತುವೆಯಿಂದ ಕೆಳಕ್ಕೆ ತಳ್ಳಿ ಹಾಕಿದ್ದಾನೆ ಎಂದು ಎನ್ನಲಾಗಿದೆ.

ಬಳಿಕ ಮುತ್ತು ಕೂಡಾ ನಾಪತ್ತೆಯಾಗಿದ್ದು, ಇಲ್ಲಿಯವೆರೆಗೆ ಕಮಲ ಅವರ ಸುಳಿವು ಕೂಡ ದೊರೆತಿಲ್ಲ ಎಂದು ತಿಳಿದುಬಂದಿದೆ.

Pages