ಮಂಗಳೂರು: ನೀಫಾ ಶಂಕೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ವರದಿ ನೆಗೆಟಿವ್. - News Ubaar

ಇತ್ತೀಚಿನ ಸುದ್ದಿ

Subscribe

ಬುಧವಾರ, ಸೆಪ್ಟೆಂಬರ್ 15, 2021

ಮಂಗಳೂರು: ನೀಫಾ ಶಂಕೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ವರದಿ ನೆಗೆಟಿವ್.

ಮಂಗಳೂರು: ನಿಫಾ ಸೋಂಕಿನ ಶಂಕೆಯಲ್ಲಿ ಇಲ್ಲಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ಪರೀಕ್ಷಾ ವರದಿ‌ ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ.

ಕಾರವಾರ ಮೂಲದ ಈ ಯುವಕ ಗೋವಾದಲ್ಲಿ ಆರ್ ಟಿಪಿಸಿಆರ್ ತಯಾರಿಕಾ ಲ್ಯಾಬ್ ನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿಂದ ರಜೆಯಲ್ಲಿ ಕಾರವಾರಕ್ಕೆ ಬಂದವನಿಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ನಿಫಾ ವೈರಸ್ ಇರಬಹುದು ಎಂದು ಕಾರವಾರ ಆಸ್ಪತ್ರೆಗೆ ಹೋಗಿ ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ಬಂದಿದ್ದಾನೆ. ಆ ಬಳಿಕ ಅಲ್ಲಿಂದ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ಬಂದಿದ್ದು, ಆತನ ಸ್ಯಾಂಪಲ್‌ನ್ನು ಸಂಗ್ರಹ ಮಾಡಿರುವ ದಕ್ಷಿಣಕನ್ನಡ ಜಿಲ್ಲಾ ಆರೋಗ್ಯ ಇಲಾಖೆ ಪುಣೆಯ ಲ್ಯಾಬ್‌ಗೆ ಕಳುಹಿಸಿತ್ತು. ಸದ್ಯ ವರದಿ ನೆಗೆಟಿವ್ ಬಂದಿದ್ದು ನಿಟ್ಟುಸಿರು ಬಿಡುವಂತಾಗಿದೆ.

Pages