ನ್ಯೂಸ್ ಉಪ್ಪಿನಂಗಡಿ:ಡಿ.31,ನಗರದ ನಂತೂರು ಬಳಿಯ ಪದುವಾ ಶಾಲೆಯ ಮುಂಭಾಗದಲ್ಲಿ ಎರಡು ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿದ್ದು ಓರ್ವ ಯುವಕ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಮೃತ ಯುವಕನನ್ನು ಕಾಲೇಜು ವಿದ್ಯಾರ್ಥಿ, ಕುದ್ರೋಳಿಯ ಸಿಪಿಸಿ ಕಾಂಪೌಂಡ್ ನಿವಾಸಿ ಅಜೀಜ್ ಮುಹಮ್ಮದ್ ಹಸನ್ ಅವರ ಪುತ್ರ ಹಸನ್ ತೈಶೀರ್ (18) ಎಂದು ಗುರುತಿಸಲಾಗಿದೆ.
ಕಾಲೇಜು ವಿದ್ಯಾರ್ಥಿಯಾಗಿದ್ದ ಈತ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಈ ಬಗ್ಗೆ ಸಂಚಾರ ಪೂರ್ವ (ಕದ್ರಿ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.