ಪುತ್ತೂರು ತಾಲೂಕಿನಲ್ಲಿ ಶೇ.78.45 ಮತದಾನ - News Ubaar

ಇತ್ತೀಚಿನ ಸುದ್ದಿ

Subscribe

ಭಾನುವಾರ, ಡಿಸೆಂಬರ್ 27, 2020

ಪುತ್ತೂರು ತಾಲೂಕಿನಲ್ಲಿ ಶೇ.78.45 ಮತದಾನ

ನ್ಯೂಸ್ ಉಪ್ಪಿನಂಗಡಿ
ಉಪ್ಪಿನಂಗಡಿ:ಡಿ.27ರಂದು ನಡೆದ ದ್ವಿತೀಯ ಹಂತದ ಗ್ರಾಮ ಪಂಚಾಯತ್ ಚುನಾವಣೆಯು ಶಾಂತಿಯುತವಾಗಿ ಮುಕ್ತಾಯಗೊಂಡಿದೆ. ಪುತ್ತೂರು ತಾಲೂಕಿನಲ್ಲಿ ಶೇ.೭೮.೪೫ ಮತದಾನವಾಗಿದೆ.
ಪುತ್ತೂರು ತಾಲೂಕಿನ ಒಟ್ಟು ೧,೧೧,೦೫೩ ಮತದಾರರ ಪೈಕಿ ೪೧೯೭೬ ಪುರುಷರು ಹಾಗೂ ೪೨೩೫೫ ಮಹಿಳೆಯರು ಸೇರಿದಂತೆ ೮೪೩೩೧ ಮಂದಿ ಮತ ಚಲಾವಣೆ ಮಾಡಿದ್ದಾರೆ.
* ಶೇಖಮಲೆ ಗರೀಷ್ಠ, ಬೆಟ್ಟಂಪಾಡಿ ಕನೀಷ್ಠ
ತಾಲೂಕಿನ ೧೫೧ ಮತಗಟ್ಟೆಗಳ ಪೈಕಿ ಅರಿಯಡ್ಕ ಗ್ರಾ.ಪಂನ ಅರಿಯಡ್ಕ ವಾರ್ಡ್ ೩ರಲ್ಲಿ ಮತಗಟ್ಟೆ ಸಂಖ್ಯೆ ೮೯ರ ಶೇಖಮಲೆ ಹಿ,ಪ್ರಾ ಶಾಲೆಯ್ಲಲಿ ಶೇ.೮೯.೯೦ ಗರೀಷ್ಠ ಮತದಾನವಾಗಿದೆ. ಬೆಟ್ಟಂಪಾಡಿ ಗ್ರಾ.ಪಂನ ಬೆಟ್ಟಂಪಾಡಿ ವಾರ್ಡ್ ೨ರಲ್ಲಿ ಮತಗಟ್ಟೆ ಸಂಖ್ಯೆ ೭೬ ಹಿ.ಪ್ರಾ ಶಾಲೆ ಬೆಟ್ಟಂಪಾಡಿ(ಪೂರ್ವಭಾಗದಲ್ಲಿ)ಶೇ.೫೧ ಕನಿಷ್ಠ ಮತ ಚಲಾವಣೆಯಾಗಿದೆ.
ಮುಂಜಾನೆ ೭ ಗಂಟೆಯಿಂದ ಮತದಾನ ಪ್ರಕ್ರಿಯೆ ಪ್ರಾರಂಭಗೊಂಡು ಸಂಜೆ ಗಂಟೆಯ ತನಕ ಮತದಾನ ಪ್ರಕ್ರಿಯೆಗಳು ನಡೆಯಿತು. ಕೊರೋನಾ ವೈರಸ್ ಮುಂಜಾಗ್ರತ ಕ್ರಮವಾಗಿ ಪ್ರತಿ ಮತಗಟ್ಟೆಗಳಲ್ಲಿಯೂ ಮತದಾರರನ್ನು ಥರ್ಮಲ್ ಸ್ಕ್ರೀನಿಂಗ್ ನಡೆಸಿ ಸ್ಯಾನಿಟೈಸರ್ ಹಚ್ಚಿದ ಬಳಿಕ ಮತಗಟ್ಟೆಯ ಒಳಗಡೆ ಕಳುಹಿಸಲಾಗುತ್ತಿತ್ತು. ಮತಗಟ್ಟೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮತದಾರರು ಮಾಸ್ಕ್ ಧರಿಸುವುದು ಕಡ್ಡಾಯವಾಗಿತ್ತು. ಸಹಾಯಕ ಆಯುಕ್ತ ಡಾ.ಯತೀಶ್ ಉಲ್ಲಾಲ್ ಹಾಗೂ ತಹಶೀಲ್ದಾರ್ ರಮೇಶ್ ಬಾಬು ಕಡಬದಲ್ಲಿ ತಹಶೀಲ್ದಾರ್ ಅನಂತ ಶಂಕರರವರ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆ ಸುಸೂತ್ರವಾಗಿ ನೆರವೇರಿದೆ. ಸಂಜೆ ತೆಂಕಿಲ ವಿವೇಕಾನಂದ ವಿದ್ಯಾ ಸಂಸ್ಥೆಗಳ ಆವರಣದಲ್ಲಿ ಡಿಮಸ್ಟರಿಂಗ್ ಕಾರ್ಯಗಳು ನಡೆದವು.

Pages