ದೆಹಲಿ ಹಿಂಸಾಚಾರ; ಪಿಎಫ್ ಐ ಸೇರಿದಂತೆ ಮುಸ್ಲಿಂ ಸಂಘಟನೆಗಳ ವಿರುದ್ಧ ಪ್ರಕರಣ ದಾಖಲಿಸಿದ ಜಾರಿ ನಿರ್ದೇಶನಾಲಯ - News Ubaar

ಇತ್ತೀಚಿನ ಸುದ್ದಿ

Subscribe

ಬುಧವಾರ, ಮಾರ್ಚ್ 11, 2020

ದೆಹಲಿ ಹಿಂಸಾಚಾರ; ಪಿಎಫ್ ಐ ಸೇರಿದಂತೆ ಮುಸ್ಲಿಂ ಸಂಘಟನೆಗಳ ವಿರುದ್ಧ ಪ್ರಕರಣ ದಾಖಲಿಸಿದ ಜಾರಿ ನಿರ್ದೇಶನಾಲಯ


ಬೆಂಗಳೂರು(11-03-2020): ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಹಣವರ್ಗಾವಣೆ ಮಾಡಿದ್ದಾರೆ ಎಂದು ಆರೊಪ ಮಾಡಿ  ಆಮ್ ಆದ್ಮಿ ಪಕ್ಷದ ಉಚ್ಛಾಟಿತ  ಕೌನ್ಸಿಲರ್ ತಾಹೀರ್ ಹುಸೇನ್, ಪಿಎಫ್‌ಐ ಮತ್ತು ಇತರ ಸಂಘಟನೆಗಳ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ.

ಕಳೆದ ತಿಂಗಳು ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಗುಪ್ತಚರ ದಳದ ಅಧಿಕಾರಿಯನ್ನು ಕೊಂದ ಆರೋಪ ಎದುರಿಸುತ್ತಿರುವ ಹುಸೇನ್ ವಿರುದ್ಧ ಕೇಂದ್ರ ತನಿಖಾ ಸಂಸ್ಥೆ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದೆ.

ಈಗಾಗಲೇ ಪ್ರತ್ಯೇಕ ಪಿಎಂಎಲ್‌ಎ ತನಿಖೆಯನ್ನು ಎದುರಿಸುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ವಿರುದ್ಧವೂ ಇದೇ ರೀತಿಯ ಆರೋಪಗಳನ್ನು ಮಾಡಲಾಗಿದೆ.

ದೆಹಲಿ ಹಿಂಸಾಚಾರದಲ್ಲಿ 53 ಮಂದಿ ಮೃತಪಟ್ಟು 200ಮಂದಿ ಗಾಯಗೊಂಡಿದ್ದರು. ಜೈಶ್ರೀರಾಂ ಘೋಷಣೆ ಕೂಗಿ ಆರೆಸ್ಸೆಸ್ ಪ್ರಾಯೋಜಿತ ಗುಂಪು ಹಿಂಸಾಚಾರವನ್ನು ನಡೆಸಿರುವುದು ಎಲ್ಲೆಡೆ ವಿಡಿಯೋ ಮೂಲಕ ಬಹಿರಂಗವಾಗಿತ್ತು. ಇದರ ಹಿಂದೆ ಅಮಿತ್ ಶಾ ಮತ್ತು ಬಿಜೆಪಿ ಕೈವಾಡ ಇದೆ ಎಂದು ಪ್ರತಿಪಕ್ಷಗಳು ಆರೋಪಿಸಿದೆ. ಘಟನೆಗೆ ಕುಮ್ಮಕ್ಕು ನೀಡಿದ ಬಿಜೆಪಿಯ ಕಪಿಲ್ ಮಿಶ್ರ, ಅನುರಾಗ್ ಠಾಕೂರ್ ಅವರ ವಿರುದ್ಧ ಪ್ರಕರಣಕ್ಕೆ ನ್ಯಾ.ಮುರಳೀದರ್ ಸೂಚಿಸಿದ್ದರು. ಆದರೆ ಈ ಯಾವುದೇ ಕ್ರಮವನ್ನು ಕೇಂದ್ರ ಸರಕಾರ ಕೈಗೊಂಡಿಲ್ಲ. ಬದಲಾಗಿ ಅಲ್ಪಸಂಖ್ಯಾತ ನಾಯಕರ ಮತ್ತು ಸಂಘಟನೆ ಮೇಲೆ ತಮ್ಮ ಅಧಿಕಾರದ ಪ್ರಯೋಗವನ್ನು ನಡೆಸುತ್ತಿದೆ. ಮತ್ತು ಘಟನೆಯನ್ನು ಅಲ್ಪಸಂಖ್ಯಾತರ ಮೇಲೆ ಕಟ್ಟುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂಬಂತಹ ಆರೋಪ ಕೇಳಿ ಬಂದಿದೆ.

Pages