ಬಜ್ಪೆ: ಇದು 2002 ಅಲ್ಲ ಬದಲಾಗಿ ಇದು 2020 - ಪಿಎಫ್ಐ ಜಿಲ್ಲಾ ನಾಯಕ ಹನೀಫ್ ಕಾಟಿಪಳ್ಳ - News Ubaar

ಇತ್ತೀಚಿನ ಸುದ್ದಿ

Subscribe

ಶುಕ್ರವಾರ, ಮಾರ್ಚ್ 13, 2020

ಬಜ್ಪೆ: ಇದು 2002 ಅಲ್ಲ ಬದಲಾಗಿ ಇದು 2020 - ಪಿಎಫ್ಐ ಜಿಲ್ಲಾ ನಾಯಕ ಹನೀಫ್ ಕಾಟಿಪಳ್ಳ


ಮಂಗಳೂರು : ದೆಹಲಿ ಪೋಲಿಸರ ತಾರತಮ್ಯ ನೀತಿ ಹಾಗು ಪಿಎಫ್ಐ ದೆಹಲಿ ರಾಜ್ಯ ನಾಯಕರ  ಮತ್ತು ಅಮಾಯಕ ಮುಸ್ಲಿಂ ಯುವಕರ ಬಂಧನದ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲೆಯ ವತಿಯಿಂದ ಬಜಪೆ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಿತು. 
    ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ದ. ಕ. ಜಿಲ್ಲಾ  ಸಮಿತಿ  ಸದಸ್ಯರಾದ ಹನೀಫ್ ಕಾಟಿಪಳ್ಳ ದೆಹಲಿ ಗಲಭೆಯ ಸಂತ್ರಸ್ತರಿಗೆ ಕಾನೂನು ನೆರವು ಹಾಗು ಭಯಭೀತರಾಗಿದ್ದ ದೆಹಲಿ ಜನತೆಗೆ ಧೈರ್ಯ ನೀಡಿದ್ದೇ ಇಂದು ನಾಯಕರ ಬಂಧನಕ್ಕೆ ಕಾರಣವಾಗಿದೆ. ಸರಕಾರದ ಗೃಹ ಇಲಾಖೆಯ ವೈಫಲ್ಯವನ್ನು ಮರೆಮಾಚಲು ಇಂತಹ ಕುಕೃತ್ಯ ಮಾಡುತ್ತಿದ್ದಾರೆ. ಆದರೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ನಿಮ್ಮ ಯಾವುದೇ ಇಂತಹ ಯಾವುದೇ ಬೆದರಿಕೆಗೆ ಬಗ್ಗುವುದಿಲ್ಲ ಬದಲಾಗಿ ನಮ್ಮ ಹೋರಾಟ ಇನ್ನಷ್ಟು ಬಲಗೊಳ್ಳುತ್ತದೆಯೇ ಹೊರತು ನಮ್ಮ ಹೋರಾಟವನ್ನು ನಿಲ್ಲಿಸಲು ಇವರಿಂದ ಸಾದ್ಯವಿಲ್ಲ ಎಂದರು. ಬ್ರಿಟಿಷರನ್ನು ಭಾರತೀಯರು ಯಾವ ರೀತಿ ಹೋಡಿಸಿದ್ದಾರೋ ಅದೇ ರೀತಿ ಇಲ್ಲಿನ ಸಂಘ ಪರಿವಾರವನ್ನು ಕೂಡ ನಾವು ಭಾರತೀಯರು ಓಡಿಸಲಿದ್ದೇವೆ ಎಂದು ಸಂಘ ಪರಿವಾರಕ್ಕೆ ಎಚ್ಚರಿಸಿದರು.
 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಮೊಹಿದೀನ್ ಹಳೆಯಂಗಡಿ ವಹಿಸಿದ್ದರು. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮುಲ್ಕಿ ಮೂಡಬಿದಿರೆ ಅಧ್ಯಕ್ಷ ಆಸಿಫ್ ಕೋಟೆಬಾಗಿಲು ಪ್ರಾಸ್ತಾವಿಕ ಮಾತನಾಡಿದರು. 
  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಜಿಲ್ಲಾ ಕಾರ್ಯದರ್ಶಿ ನವಾಝ್ ಕಾವೂರು, ಬಜಪೆ ಗ್ರಾ.ಪಂ ಸದಸ್ಯರಾದ ನಝೀರ್ ಬಜಪೆ, ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ಹನೀಫ್ ಕಾವೂರು ಉಪಸ್ಥಿತರಿದ್ದರು. 
  ಪ್ರತಿಭಟನೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.
  ಇಕ್ಬಾಲ್ ಜೋಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Pages