ದ.ಕ. ಜಿಲ್ಲಾ ಎಸ್ಪಿ, ಕಮೀಷನರ್ ವರ್ಗಾವಣೆ – ದ.ಕ.ಗೆ ಪವರ್‌ಫುಲ್ ಪೊಲೀಸ್ ಪೇರ್! ಅರುಣ್ ಕುಮಾರ್ – ಎಸ್ಪಿ, ಸುಧೀರ್ ರೆಡ್ಡಿ – ಕಮೀಷನರ್ - News Ubaar

ಇತ್ತೀಚಿನ ಸುದ್ದಿ

Subscribe

ಗುರುವಾರ, ಮೇ 29, 2025

ದ.ಕ. ಜಿಲ್ಲಾ ಎಸ್ಪಿ, ಕಮೀಷನರ್ ವರ್ಗಾವಣೆ – ದ.ಕ.ಗೆ ಪವರ್‌ಫುಲ್ ಪೊಲೀಸ್ ಪೇರ್! ಅರುಣ್ ಕುಮಾರ್ – ಎಸ್ಪಿ, ಸುಧೀರ್ ರೆಡ್ಡಿ – ಕಮೀಷನರ್

 

ಪುತ್ತೂರು: ಕೋಮು ದ್ವೇಷದಿಂದ ದಹದಹಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಪವರ್ ಫುಲ್ ಐಪಿಎಸ್ ಅಧಿಕಾರಿಗಳು ಎಂಟ್ರಿ ಪಡೆದುಕೊಂಡಿದ್ದಾರೆ. ಈಗಿರುವ ಎಸ್ಪಿ ಯತೀಶ್ ಹಾಗೂ ಕಮೀಷನರ್ ಅಗರ್’ವಾಲ್ ವರ್ಗಾವಣೆಗೊಂಡಿದ್ದಾರೆ.


2017ರಲ್ಲಿ ದಕ ಎಸ್ಪಿಯಾಗಿ ಹೊಸ ಭಾಷ್ಯ ಬರೆದಿದ್ದ ಸುಧೀರ್ ಕುಮಾರ್ ರೆಡ್ಡಿ ಮತ್ತೆ ಮಂಗಳೂರು ಕಮೀಷನರ್ ಆಗಿ ಬರುತ್ತಿದ್ದಾರೆ. ಅದೇ ರೀತಿ ಉಡುಪಿಯ ಎಸ್ಪಿಯಾಗಿರುವ ಅರುಣ್ ಕುಮಾರ್ ಅವರು ದಕ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದಾರೆ.


ಸುಧೀರ್ ಕುಮಾರ್ ರೆಡ್ಡಿ ಹೆಸರು ಕೇಳಿದರೇನೆ ಕೆಲವರಿಗೆ ಸಣ್ಣಗೆ ಬೆನ್ನುಹುರಿಯಲ್ಲಿ ನಡುಕ ಶುರು ಆಗುತ್ತದೆ. ದಕ ಎಸ್ಪಿಯಾಗಿದ್ದ ಸಂದರ್ಭ ಅವರ ಕಾರ್ಯವೈಖರಿಯೇ ಇದಕ್ಕೆ ಕಾರಣ. ಹಲವು ಕಾರ್ಯಾಚರಣೆಗಳ ಮೂಲಕ ಮನೆಮಾತಾದವರು.


ದಕದಿಂದ ಬೆಳಗಾವಿಗೆ ಎಸ್ಪಿಯಾಗಿ ತೆರಳಿದ ಅವರು, ನಂತರ ಆಂಧ್ರಕ್ಕೆ ವರ್ಗಾವಣೆ ಆಗಿದ್ದರು. ನಂತರ ರಾಜ್ಯದ ಗುಪ್ತಚರ ವಿಭಾಗದ ಐಜಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಬೂದಿ ಮುಚ್ಚಿದ ಕೆಂಡದಂತಿರುವ ದ.ಕ.ಕ್ಕೆ ಕಮೀಷನರ್ ಆಗಿ ಬರುತ್ತಿದ್ದಾರೆ.



ಅರುಣ್ ಕುಮಾರ್ ಕೂಡ ಉಡುಪಿಯಲ್ಲಿ ತಮ್ಮ ಐಪಿಎಸ್ ಖದರ್ ತೋರಿಸಿ, ಜನರಲ್ಲಿ ಆರಕ್ಷಕರ ಬಗ್ಗೆ ಗೌರವ ಮೂಡುವಂತಹ ಕೆಲಸ ಮಾಡುತ್ತಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.



Pages