ನ್ಯೂಸ್ ಉಬಾರ್, ಎ.6: ಶಿರಾಡಿ ಘಾಟ್ ಬಳಿ ಮದ್ಯಪಾನ ಮಾಡಿದ್ದ ನಾಲ್ಕು ಯುವಕರು ಕಾರಿನಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದ ವೇಳೆ ನಿಯಂತ್ರಣ ತಪ್ಪಿದ ಕಾರು ಇನ್ನೊಂದು ವಾಹನಕ್ಕೆ ಗುದ್ದಿದೆ. ಮತ್ತು ಸ್ಥಳದಲ್ಲಿದ್ದ ಇತರ ವಾಹನ ಚಾಲಕರಿಗೆ ಅವಾಚ್ಯಾ ಶಬ್ದಗಳಿಂದ ನಿಂಧಿಸಿದರಿಂದ ಇತರ ವಾಹನ ಚಾಲಕರು ಆರೋಪಿಗಳನ್ನು ಗಂಭೀರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ
ಅಪಘಾತದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬ ಮಾಹಿತಿ ಲಭಿಸಿದೆ.
ಪ್ರಮುಖವಾಗಿ, ಕಾರಿನಲ್ಲಿ ಮದ್ಯದ ಬಾಟಲ್ಗಳನ್ನು ಕಂಡು ಬಂದ ಹಿನ್ನಲೆಯಲ್ಲಿ ಸ್ಥಳದಲ್ಲಿದ್ದ ಇತರ ವಾಹನ ಚಾಲಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ
ಇದರ ನಡುವೆ ಶಿರಾಡಿ ಘಾಟ್ ನಲ್ಲಿ ಭಾರಿ ಮಳೆ ಕಾರಣದಿಂದ ರಸ್ತೆಯಲ್ಲಿ ಕೆಸರು ತುಂಬಿಕೊಂಡಿದ್ದು, ಲಾರಿಗಳು ಸ್ಲಿಪ್ ಆಗಿ ಕೆಲ ಸಮಯದವರೆಗೆ ಸಂಪೂರ್ಣ ಟ್ರಾಫಿಕ್ ಜಾಂ ಉಂಟಾಯಿತು.

