ಉಪ್ಪಿನಂಗಡಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧವಾಗಿ ನಾಳೆ ಏಪ್ರಿಲ್ 15ರಂದು ಉಪ್ಪಿನಂಗಡಿಯಲ್ಲಿ ಬೃಹತ್ ಮಟ್ಟದ ಪ್ರತಿಭಟನೆ ನಡೆಯಲಿದೆ. ನಾಗರಿಕ ಹಿತರಕ್ಷಣಾ ವೇದಿಕೆ ಉಪ್ಪಿನಂಗಡಿ ಘಟಕದ ಆಶ್ರಯದಲ್ಲಿ ಈ ಪ್ರತಿಭಟನೆ ಇಂಡಿಯನ್ ಸ್ಕೂಲ್ ವಠಾರ ದಲ್ಲಿ ಸಂಜೆ 3.30ಕ್ಕೆ ಆರಂಭವಾಗಲಿದೆ.
ವಿವಿಧ ಧರ್ಮಗಳ ಹಾಗೂ ಸಮಾಜದ ಪ್ರತಿಷ್ಠಿತ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಸರ್ಕಾರದ ಜನವಿರೋಧಿ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಹತ್ತಿಕ್ಕುವ ನಿಟ್ಟಿನ ಈ ತಿದ್ದುಪಡಿ ಕಾಯ್ದೆಯ ವಿರೋಧವಾಗಿ ಸಾರ್ವಜನಿಕರು ಒಂದುಗೂಡಿ ಧ್ವನಿ ಎತ್ತುವ ನಿರೀಕ್ಷೆಯಿದೆ.
ಪ್ರಮುಖವಾಗಿ ಭಾಗವಹಿಸುವವರು:
ಅಶೋಕ್ ಕುಮಾರ್ ರೈ(ಮಾನ್ಯ ಶಾಸಕರು ಪುತ್ತೂರು), ಸುಧೀರ್ ಕುಮಾರ್ ಮರೋಳಿ, ಮುನೀರ್ ಕಾಟಿಪಳ್ಳ, ಅನ್ವರ್ ಸಾಧತ್ ಬಜತ್ತುರ್, ಇಸಾಕ್ ಪುತ್ತೂರು, ಡಾ. ಎಮ್ಮೆಸೆಮ್ ಅಬ್ದುರಶೀದ್ ಝೖನಿ ಕಾಮಿಲ್ ಸಖಾಫಿ, ಇಕ್ಬಾಲ್ ಬಾಳಿಲ.
ಈ ಪ್ರತಿಭಟನೆ ಕೇಂದ್ರ ಸರ್ಕಾರದ ವಿರೋಧಾತ್ಮಕ ನೀತಿಗಳನ್ನು ಖಂಡಿಸುವ ನಿಟ್ಟಿನಲ್ಲಿ, ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟವೆಂದು ಸಂಘಟಕರು ತಿಳಿಸಿದ್ದಾರೆ

