ಬೆಂಗಳೂರು: ರಾಜ್ಯದಲ್ಲಿ ಹಕ್ಕಿಜ್ವರದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಶುಸಂಗೋಪನೆ ಇಲಾಖೆ ಹಕ್ಕಿಜ್ವರ ನಿಯಂತ್ರಣಕ್ಕಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸಿ, ರಾಜ್ಯ ಸರ್ಕಾರವು ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆಗೆ ಸುರಕ್ಷಿತ ವಿಧಾನಗಳನ್ನು ಪ್ರಕಟಿಸಿದೆ.
ಪಶುಸಂಗೋಪನೆ ಇಲಾಖೆ ಹೇಳಿದ ಪ್ರಮುಖ ಮುಂಜಾಗ್ರತಾ ಕ್ರಮಗಳು:
✔ ಕೋಳಿ ಮಾಂಸ ಮತ್ತು ಮೊಟ್ಟೆಯನ್ನು ಕನಿಷ್ಠ 70°C ಉಷ್ಣಾಂಶದಲ್ಲಿ 30 ನಿಮಿಷ ಬೇಯಿಸಿ ಸೇವಿಸಬೇಕು.
✔ ಹಸಿ ಕೋಳಿ ಮಾಂಸ ಹಾಗೂ ಅದರಿಂದ ಬಂದ ದ್ರವಗಳು ಬೇಯಿಸದೆ ತಿನ್ನುವ ಆಹಾರದ ಸಂಪರ್ಕಕ್ಕೆ ಬಾರದೆ ಎಚ್ಚರಿಕೆ ವಹಿಸಬೇಕು.
✔ ಕೋಳಿ ಮಾಂಸ ತಯಾರಿಸುವವರು ಕೈಯನ್ನು ನಂಜುನಾಶಕದಿಂದ ಸ್ವಚ್ಛಗೊಳಿಸಬೇಕು.
✔ ಬೇಯಿಸದ ಮೊಟ್ಟೆ ಅಥವಾ ಅರೆಬೆಂದ ಮೊಟ್ಟೆ ಸೇವನೆಗೆ ಮುಕ್ತಾಯ ಹಾಕಬೇಕು.
✔ ಸಾರ್ವಜನಿಕರು ಅನಗತ್ಯವಾಗಿ ಕೋಳಿ ಫಾರಂಗೆ ಭೇಟಿ ನೀಡಬಾರದು.
ಈ ನಿಯಮಗಳನ್ನು ಪಾಲಿಸುವುದರಿಂದ ಹಕ್ಕಿಜ್ವರದ ಭೀತಿ ಕಡಿಮೆಯಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

