ದುಬೈ ‘ಬ್ಯಾರಿ ಮೇಳ’ದಲ್ಲಿ ಉದ್ಯಮಿ, ಸಮಾಜ ಸೇವಕ ಡಾ.ರೊನಾಲ್ಡ್ ಕೊಲಾಸೊಗೆ ‘Global Icon of Philanthropy’ ಪ್ರಶಸ್ತಿ ಪ್ರದಾನ; ಸಮಾಜ ಸೇವೆಗೈಯ್ಯುವಂತೆ ಪ್ರತಿಜ್ಞೆ ಬೋಧಿಸಿದ ಕೊಲಾಸೊ - News Ubaar

ಇತ್ತೀಚಿನ ಸುದ್ದಿ

Subscribe

ಸೋಮವಾರ, ಫೆಬ್ರವರಿ 10, 2025

ದುಬೈ ‘ಬ್ಯಾರಿ ಮೇಳ’ದಲ್ಲಿ ಉದ್ಯಮಿ, ಸಮಾಜ ಸೇವಕ ಡಾ.ರೊನಾಲ್ಡ್ ಕೊಲಾಸೊಗೆ ‘Global Icon of Philanthropy’ ಪ್ರಶಸ್ತಿ ಪ್ರದಾನ; ಸಮಾಜ ಸೇವೆಗೈಯ್ಯುವಂತೆ ಪ್ರತಿಜ್ಞೆ ಬೋಧಿಸಿದ ಕೊಲಾಸೊ

 


ದುಬೈ: ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ(ಬಿಸಿಸಿಐ) ಆಶ್ರಯದಲ್ಲಿ ರವಿವಾರ ದುಬೈಯಯ ಇತಿಸಲಾತ್ ಅಕಾಡೆಮಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಬ್ಯಾರಿ ಮೇಳದಲ್ಲಿ ಅನಿವಾಸಿ ಭಾರತೀಯ ಉದ್ಯಮಿ, ಸಮಾಜ ಸೇವಕ, ಕೊಡುಗೈ ದಾನಿ ಡಾ.ರೊನಾಲ್ಡ್ ಕೊಲಾಸೊ ಅವರಿಗೆ ‘Global Icon of Philanthropy’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬ್ಯಾರಿ ಮೇಳದ ಸಮಾರೋಪ ಸಮಾರಂಭದಲ್ಲಿ ಸಹಸ್ರಾರು ಜನರ, ಹತ್ತುಹಲವು ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಡಾ.ರೊನಾಲ್ಡ್ ಕೊಲಾಸೊ, ಸಭೆಯಲ್ಲಿದ್ದವರನ್ನು ಒಂದು ನಿಮಿಷಗಳ ಕಾಲ ಎದ್ದು ನಿಲ್ಲುವಂತೆ ಮನವಿ ಮಾಡಿ, ‘ನಾವಿಂದು ದುಡಿಯುವ ಹಣದಲ್ಲಿ ಒಂದು ಪಾಲನ್ನು ಸಮಾಜದಲ್ಲಿರುವ ಅಶಕ್ತರು, ಬಡವರು, ನಿರ್ಗತಿಕರಿಗೆ ಮುಡಿಪಾಗಿಡೋಣ. ಇದನ್ನು ನಾವು ಇಂದಿನಿಂದಲೇ ಆರಂಭಿಸೋಣ’ ಎಂದು ಪ್ರತಿಜ್ಞೆ ಬೋಧಿಸಿದರು. ಈ ವೇಳೆ ಕಾರ್ಯಕ್ರಮದಲ್ಲಿ ನೆರೆದಿದ್ದ ಸಹಸ್ರಾರು ಮಂದಿ ಎದ್ದು ನಿಂತು ಕೊಲಾಸೊ ಅವರ ಪ್ರತಿಜ್ಞೆಗೆ ಕೈಜೋಡಿಸಿದರು.

ನನ್ನ ಮದುವೆ ಸಂದರ್ಭದಲ್ಲಿ ಧರ್ಮಗುರುಗಳ ಸಮ್ಮುಖದಲ್ಲಿ ದಾಂಪತ್ಯದ ಪ್ರಮಾಣ ಸ್ವೀಕರಿಸಬೇಕಿತ್ತು. ದಾಂಪತ್ಯದ ಪ್ರಮಾಣ ಸ್ವೀಕರಿಸುವ ಗಳಿಗೆ ಬಂದಾಗ, ನಾನು ಮತ್ತು ಜೀನ್ ಕೊಲಾಸೊ ಸಮಾಜ ಸೇವೆಯ ಪ್ರಮಾಣ ಮಾಡಿದೆವು. ತಮ್ಮ ದುಡಿಮೆಯ, ತಮ್ಮ ಗಳಿಕೆಯ ಒಂದಷ್ಟು ಪ್ರಮಾಣವನ್ನು ಜನರಿಗಾಗಿ, ದೇಶಕ್ಕಾಗಿ, ವಿಶ್ವದ ಶಾಂತಿಗಾಗಿ ನೀಡುವ ಪ್ರಮಾಣವನ್ನು ನಾವು ಮಾಡಿದೆವು ಎಂಬುದನ್ನು ಡಾ.ರೊನಾಲ್ಡ್ ಕೊಲಾಸೊ ಕಾರ್ಯಕ್ರಮದಲ್ಲಿ ಸ್ಮರಿದರು.

ನಾನು ಹುಟ್ಟಿ ಬೆಳೆದು ಬಂದ ಸಮಾಜಕ್ಕೆ ಏನಾದರೂ ಕೊಡುಗೆ ನೀಡಿದ್ದರೂ, ಅದು ನನ್ನ ಜವಾಬ್ದಾರಿ ಎಂದು ಭಾವಿಸಿದ್ದೇನೆಯೇ ಹೊರತು, ಡಾಕ್ಟರೇಟಿಗಾಗಲಿ, ಸನ್ಮಾನ, ಗೌರವಕ್ಕಾಗಿ ಅಲ್ಲ. ನಾನು ಮತ್ತು ನನ್ನ ಧರ್ಮ ಪತ್ನಿ ಜೀನ್ ಕೊಲಾಸೊ ಸಮಾಜ ಸೇವೆಗಾಗಿ ಜಾತಿ, ಧರ್ಮ ನೋಡದೇ ಹತ್ತಲವು ಕಾರ್ಯವನ್ನು ಮಾಡುತ್ತಲೇ ಬರುತ್ತಿದ್ದೇವೆ. ನೀವು ಕೂಡ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿ ಎಂದರು.

ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕರ್ನಾಟಕದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ರಾಜ್ಯ ಹಜ್‌ ಸಚಿವ ರಹೀಮ್ ಖಾನ್, ಕರ್ನಾಟಕ ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ದುಬೈಯ ಭಾರತೀಯ ರಾಯಭಾರಿ ಸತೀಶ್ ಕುಮಾರ್ ಸಿವನ್, ಯುಎಇಯ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ(ಬಿಸಿಸಿಐ) ಅಧ್ಯಕ್ಷ ಹಿದಾಯತ್‌ ಅಡ್ಡೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ರೊನಾಲ್ಡ್ ಕೊಲಾಸೊ ಅವರು ಯಶಸ್ವಿ ಉದ್ಯಮಿಯಷ್ಟೇ ಅಲ್ಲ, ಅನನ್ಯ ಸಮಾಜ ಸೇವಕರೂ ಆಗಿದ್ದು, ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯವರು. ಉದ್ಯೋಗ, ಉದ್ಯಮ ಎರಡರಲ್ಲೂ ಅಸಾಮಾನ್ಯ ಯಶಸ್ಸು ಕಂಡ ರೊನಾಲ್ಡ್ ಕೊಲಾಸೊ ಅವರು, ಸಮಾಜ ತನಗೆ ನೀಡಿದ ಹಾಗೆಯೇ ತಾನೂ ಸಮಾಜಕ್ಕೆ ನೀಡಬೇಕು ಎಂದು ಪಣತೊಟ್ಟು ಸೇವಾ ಚಟುವಟಿಕೆಗಳಿಗೆ ಧುಮುಕಿದರು. ಧರ್ಮ, ಜಾತಿ, ಭಾಷೆ, ಲಿಂಗ, ಪ್ರದೇಶಗಳ ಭೇದವಿಲ್ಲದೆ ಅರ್ಹರಿಗೆ ಸಹಾಯಹಸ್ತ ಚಾಚುವುದನ್ನು ನಿರಂತರ ಮಾಡುತ್ತಾ ಬಂದಿದ್ದಾರೆ.



Pages