ಹಾಸನ : ಗಗನಕ್ಕೇರಿದ ಕಾಫಿ ದರ; ತಮ್ಮನ ಮನೆ ಮುಂದೆ ಒಣಗಲು ಹಾಕಿದ ಕಾಫಿ ಕದಿಯಲು ಹೋಗಿ ಸಿಕ್ಕಿ ಬಿದ್ದ ಅಣ್ಣ - News Ubaar

ಇತ್ತೀಚಿನ ಸುದ್ದಿ

Subscribe

ಸೋಮವಾರ, ಫೆಬ್ರವರಿ 10, 2025

ಹಾಸನ : ಗಗನಕ್ಕೇರಿದ ಕಾಫಿ ದರ; ತಮ್ಮನ ಮನೆ ಮುಂದೆ ಒಣಗಲು ಹಾಕಿದ ಕಾಫಿ ಕದಿಯಲು ಹೋಗಿ ಸಿಕ್ಕಿ ಬಿದ್ದ ಅಣ್ಣ

 ಹಾಸನ : ಕಾಫಿ ದರ ದಿನೇ ದಿನೇ ಗಗನಕ್ಕೇರುತ್ತಿದೆ. ಹಾಗಾಗಿ ಕಾಫಿ ಕಳ್ಳರ ಹಾವಳಿ ಜೋರಾಗಿದೆ. ಹೀಗಿರುವಾಗಲೇ ತಮ್ಮನ ಮನೆ ಮುಂದೆ ಒಣಗಲು ಹಾಕಿದ ಕಾಫಿ ಕದಿಯಲು ಹೋಗಿ ಅಣ್ಣನೊಬ್ಬ ಸಿಕ್ಕಿ ಬಿದ್ದ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ, ಅರಕೆರೆ ಗ್ರಾಮದಲ್ಲಿ ನಡೆದಿದೆ.

ಅಣ್ಣ ಮಂಜುನಾಥ್ ಹಾಗೂ ತಮ್ಮನ ಮನೆ ಅಕ್ಕಪಕ್ಕದಲ್ಲೇ ಇದ್ದು ತಮ್ಮನ ಮನೆಯ ಮುಂದೆ ಒಣಗಲು ಹಾಕಿದ್ದ ಕಾಫಿಯನ್ನು ಕದಿಯಲು ಅಣ್ಣ ಮಂಜುನಾಥ್ ಬಂದಿದ್ದಾನೆ.ಪ್ಲಾಸ್ಟಿಕ್ ಚೀಲ ಹಿಡಿದು ಕಾಫಿ ಬೀಜ ಕದಿಯಲು ಬಂದಿದ್ದಾನೆ. ಅಲ್ಲಿ ಸಿಸಿಟಿವಿ ನೋಡುತ್ತಲೇ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಅಲ್ಲದೇ ಕದಿಯಲು ಯತ್ನಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಮಂಜುನಾಥ್ ವಿರುದ್ಧ ಆತನ ತಮ್ಮನ ಮಗ ಪವನ್ ದೂರು ಕೊಟ್ಟಿದ್ದಾರೆ. ಈ ಬಗ್ಗೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Pages