‘ಇಂಡಿಯಾ ಗಾಟ್ ಲ್ಯಾಟೆಂಟ್’: ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಕ್ಷಮೆ ಕೇಳಿದ ಯೂಟ್ಯೂಬರ್‌ ರಣವೀರ್..! - News Ubaar

ಇತ್ತೀಚಿನ ಸುದ್ದಿ

Subscribe

ಸೋಮವಾರ, ಫೆಬ್ರವರಿ 10, 2025

‘ಇಂಡಿಯಾ ಗಾಟ್ ಲ್ಯಾಟೆಂಟ್’: ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಕ್ಷಮೆ ಕೇಳಿದ ಯೂಟ್ಯೂಬರ್‌ ರಣವೀರ್..!

‘ಇಂಡಿಯಾ ಗಾಟ್ ಲ್ಯಾಟೆಂಟ್’: ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಕ್ಷಮೆ ಕೇಳಿದ ಯೂಟ್ಯೂಬರ್‌ ರಣವೀರ್..!




















ಮುಂಬೈ: ಖ್ಯಾತ ಯೂಟ್ಯೂಬರ್‌ ರಣವೀರ್‌ ಅಲ್ಲಾಬಾಡಿಯಾ ಅವರು ಇದೀಗ ವಿವಾದದಲ್ಲಿ ಸಿಲುಕಿದ್ದಾರೆ. ಸಮಯ್‌ ರೈನಾ ಅವರ ಇಂಡಿಯಾ ಗಾಟ್‌ ಲೇಟೆಂಟ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಣವೀರ್‌ ಅಲ್ಲಾಬಾಡಿಯಾ ವಿವಾದಾತ್ಮಕ ಹೇಳಿಕೆ ನೀಡಿ ಭಾರೀ ವಿವಾದಕ್ಕೆ ಕಾರಣವಾಗಿದ್ದಾರೆ.

ಸೋಮವಾರ, ಅವರು ಎಕ್ಸ್‌ ಜಾಲತಾಣದಲ್ಲಿ ತಮ್ಮ ತಪ್ಪುಗಳನ್ನು ಒಪ್ಪಿಕೊಂಡು ಕ್ಷಮೆಯಾಚಿಸುವ ವೀಡಿಯೊವನ್ನು ಹಂಚಿಕೊಂಡರು. ಇನ್ನು ಮುಂದೆ ತಮ್ಮ ವೇದಿಕೆಯನ್ನು ಜವಾಬ್ದಾರಿಯುತವಾಗಿ ಬಳಸುವುದಾಗಿ ಪ್ರತಿಜ್ಞೆ ಮಾಡಿದರು, ಅದನ್ನು ಎಂದಿಗೂ ಅಗೌರವಿಸುವುದಿಲ್ಲ ಎಂದು ಭರವಸೆ ನೀಡಿದರು.

“ಇಂಡಿಯಾ ಗಾಟ್‌ ಲೇಟೆಂಟ್‌ ಕಾರ್ಯಕ್ರಮದಲ್ಲಿ ಆ ಮಾತನ್ನು ನಾನು ಹೇಳಬಾರದಿತ್ತು. ಕ್ಷಮಿಸಿ. ನನ್ನ ಕಾಮೆಂಟ್ ಅನುಚಿತವಾಗಿರಲಿಲ್ಲ, ಅದು ತಮಾಷೆಯೂ ಆಗಿರಲಿಲ್ಲ. ಹಾಸ್ಯ ನನ್ನ ಶಕ್ತಿ ಅಲ್ಲ, ಕ್ಷಮಿಸಿ ಎಂದು ಹೇಳಲು ನಾನು ಇಲ್ಲಿದ್ದೇನೆ” ರಣವೀರ್ ಅಲ್ಲಾಬಾಡಿಯಾ ಹೇಳಿದ್ದಾರೆ.

ರಣವೀರ್‌ ಅಲ್ಲಾಬಾಡಿಯಾ ಹೇಳಿದ್ದೇನು?
ಬಿಯರ್ ಬೈಸೆಪ್ಸ್ ಸೇರಿದಂತೆ ಹಲವಾರು ಯೂಟ್ಯೂಬ್ ಚಾನೆಲ್‌ಗಳನ್ನು ನಡೆಸುತ್ತಿರುವ ಅಲ್ಲಾಬಾಡಿಯಾ, ರೈನಾ ನಡೆಸಿಕೊಡುವ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮದಲ್ಲಿ ಪೋಷಕರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ‘ನಿನ್ನ ಹೆತ್ತವರು ಪ್ರತಿದಿನ ಲೈಂಗಿಕ ಕ್ರಿಯೆ ನಡೆಸುವುದನ್ನು ನೋಡುತ್ತೀಯಾ ಅಥವಾ ಒಮ್ಮೆ ಅದರಲ್ಲಿ ಭಾಗವಹಿಸಿ ಅದನ್ನು ಶಾಶ್ವತವಾಗಿ ನಿಲ್ಲಿಸುತ್ತೀಯಾ?’ ಎಂದು ರಣವೀರ್ ಅಲ್ಲಾಬಾಡಿಯಾ ಸ್ಪರ್ಧಿಗೆ ಕೇಳಿದ್ದನು. ಅಲ್ಲದೆ ಈ ಕಾರ್ಯಕ್ರಮದಲ್ಲಿ ತಮ್ಮ ಖಾಸಗಿ ಭಾಗದ ಉದ್ದ ಎಂಬ ಅಸಂಬದ್ಧ ಪ್ರಶ್ನೆಗಳನ್ನು ಕೇಳುವ ಮೂಲಕ ಜೋಕ್‌ ಮಾಡಿದರು.

‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಕಾರ್ಯಕ್ರಮ ವೀಕ್ಷಿಸಿದ ಅನೇಕರು ರಣವೀರ್ ಅಲ್ಲಾಬಾಡಿಯಾ ಅವರ ಹೇಳಿಕೆ ಅಸಭ್ಯ ಮತ್ತು ಆಕ್ರಮಣಕಾರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಿದ್ದಾರೆ. ಈ ಕುರಿತು ಮುಂಬೈ ಪೊಲೀಸ್ ಕಮಿಷನರ್ ಮತ್ತು ಮಹಾರಾಷ್ಟ್ರ ಮಹಿಳಾ ಆಯೋಗಕ್ಕೆ ದೂರನ್ನು ನೀಡಲಾಗಿದೆ. ದೂರಿನಲ್ಲಿ ‘ಇಂಡಿಯಾಸ್ ಗಾಟ್ ಲ್ಯಾಟೆಂಟ್’ ಶೋನಲ್ಲಿ ನಿಂದನೀಯ ಪದಗಳನ್ನು ಬಳಸಿದ್ದಾರೆಂದು ಕಠಿಣ ಕ್ರಮಕ್ಕೆ ಆಗ್ರಹಿಸಲಾಗಿದೆ

Pages