ಕರಾವಳಿ ಭಾಗದಲ್ಲಿ ನಾಳೆ ಚಂದ್ರ ದರ್ಶನ ಸಾಧ್ಯತೆ, ಭಾನುವಾರದಿಂದ ರಮ್ಝಾನ್ ಪ್ರಾರಂಭ
ನ್ಯೂಸ್ ಉಬಾರ್ : ಕರ್ನಾಟಕದಲ್ಲಿ ರಂಜಾನ್ ತಿಂಗಳ ಆರಂಭಕ್ಕಾಗಿ ಮುಸ್ಲಿಮರ ಕಾಯುತ್ತಿದ್ದಾರೆ. ಇಂದು ಚಂದ್ರ ದರ್ಶನ ಆಗದ ಕಾರಣ, ರಾಜ್ಯಾದ್ಯಂತ ಭಾನುವಾರದಿಂದ ಉಪವಾಸ ಆರಂಭವಾಗಲಿದೆ. ಕರಾವಳಿ ಭಾಗದಲ್ಲಿ ನಾಳೆ ಚಂದ್ರ ದರ್ಶನವಾಗುವ ಸಾಧ್ಯತೆಯಿದೆ. ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಮೌಲಾನಾ ಶಫಿ ಸಅದಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಪವಿತ್ರ ರಂಜಾನ್ ತಿಂಗಳ ಆರಂಭಿಸಲು ಚಂದ್ರನ ದರ್ಶನಕ್ಕಾಗಿ ಪ್ರಪಂಚದಾದ್ಯಂತದ ಮುಸ್ಲಿಮರು ಕಾತುರದಿಂದ ಕಾಯುತ್ತಿದ್ದಾರೆ. ರಂಜಾನ್ ಮಾಸದಲ್ಲಿ ಮುಸ್ಲಿಂ ಬಾಂಧವರು ಉಪವಾಸ ಆಚರಣೆ ಮಾಡುತ್ತಾರೆ. ನಿತ್ಯ ಸೂರ್ಯೋದಯಕ್ಕೂ ಮುನ್ನ ಹಾಗೂ ಸೂರ್ಯಹಸ್ತದ ಬಳಿಕ ಇಫ್ತಾರ್ ಆಚರಿಸುತ್ತಾರೆ.
