ಕಾರ್ಕಳ: ನೀರೆಂದು ತಿಳಿದು ಆಸಿಡ್ ಕುಡಿದ ಯುವತಿ; ಪ್ಯಾಕ್ಟರಿ ಮಾಲಕನ ವಿರುದ್ಧ ದೂರು ದಾಖಲು! - News Ubaar

ಇತ್ತೀಚಿನ ಸುದ್ದಿ

Subscribe

ಗುರುವಾರ, ಸೆಪ್ಟೆಂಬರ್ 23, 2021

ಕಾರ್ಕಳ: ನೀರೆಂದು ತಿಳಿದು ಆಸಿಡ್ ಕುಡಿದ ಯುವತಿ; ಪ್ಯಾಕ್ಟರಿ ಮಾಲಕನ ವಿರುದ್ಧ ದೂರು ದಾಖಲು!

ನ್ಯೂಸ್ ಉಬಾರ್:
ಕಾರ್ಕಳ: ನೀರೆಂದು ತಿಳಿದು ಯುವತಿಯೊಬ್ಬಳು ಆಸಿಡ್ ಕುಡಿದು ತೀವ್ರವಾಗಿ ಅಸ್ವಸ್ಥಳಾದ ಘಟನೆ ಕಾರ್ಕಳದ ಮುಡಾರು ಗ್ರಾಮದ ಮುಡ್ರಾಲು ಎಂಬಲ್ಲಿನ ಶ್ರೀದೇವಿ ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ನಡೆದಿದೆ.

ಮುಡಾರು ಗ್ರಾಮದ ಬಜರ್ಕಳ ದರ್ಕಾಸು ಮನೆಯ ತೇಜಸ್ವಿನಿ (20) ಆಸಿಡ್ ಕುಡಿದಾಕೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಶ್ಯೂ ಪ್ಯಾಕ್ಟರಿಯ ಮಾಲಕನ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ಯಾಕ್ಟರಿಯಲ್ಲಿ ಕಳೆದ ಒಂದು ವರ್ಷದಿಂದ ಪ್ಯಾಕಿಂಗ್ ಕೆಲಸ ಮಾಡಿಕೊಂಡಿದ್ದ ತೇಜಸ್ವಿನಿ, 2021 ಜುಲಾಯಿ 2 ರ ಮಧ್ಯಾಹ್ನ 12 ರ ವೇಳೆಗೆ ಬಾಯಾರಿಕೆಯಾಗಿರುವುದರಿಂದ ತಣ್ಣೀರು ಎಂದು ಬಾಟಲಿಯಲ್ಲಿ ಇದ್ದ ಆಸಿಡ್ ಕುಡಿದು ತೀವ್ರ ಅಸ್ವಸ್ಥಗೊಳ್ಳಗಾಗಿದ್ದಳು.

ತಕ್ಷಣ ಅವರನ್ನು ಕಾರ್ಕಳ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ ಸಂದರ್ಭದಲ್ಲಿ ಆಸ್ಪತ್ರೆಯ ವೆಚ್ಚವನ್ನು ಫ್ಯಾಕ್ಟರಿಯ ಮಾಲಿಕರಾದ ಗಣೇಶ್ ಕಾಮತ್ ಭರಿಸುವುದಾಗಿ ಭರವಸೆಯನ್ನು ನೀಡಿದ್ದರು. ಇದನ್ನೇ ನಂಬಿದ ಯುವತಿ ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಿ ಕಾನೂನು ಕ್ರಮದ ಅಗತ್ಯ ಇಲ್ಲ ಎಂದು ತಿಳಿಸಿದ್ದಳು.

ಅಸ್ಪಸ್ಥಗೊಂಡ ಯುವತಿಯನ್ನು ವಿಚಾರಿಸಲು ಮುಂದಾಗದೇ, ಆಸ್ಪತ್ರೆಗೆ ಕೂಡಾ ಬಾರದೇ, ಆಸ್ಪತ್ರೆ ವೆಚ್ಚ ನೀಡದೇ ನಂಬಿಕೆ ದ್ರೋಹ ಹಾಗೂ ಘಟನೆಯ ಕಾರಣರಾಗಿರುವ ಫ್ಯಾಕ್ಟರಿ ಮಾಲಕ ಗಣೇಶ್ ಕಾಮತ್ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Pages