ನ್ಯೂಸ್ ಉಪ್ಪಿನಂಗಡಿ: ಡಿ.29: ಹೊಸ ವರ್ಷದ ನೆಪದಲ್ಲಿ ಪ್ರವಾಸಿಗರು ಹೆಚ್ಚು ಸಂಖ್ಯೆಯಲ್ಲಿ ಕಡಲ ತೀರಗಳಿಗೆ ಬರುತ್ತಿರುವುದರಿಂದ ಡಿ.31 ರ ಮಧ್ಯಾಹ್ನದಿಂದ ಜ.2 ರ ಮಧ್ಯಾಹ್ನ ವರೆಗೆ ಮಂಗಳೂರಿನ ಬೀಚ್ ಗಳಿಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ.
ಬ್ರಿಟನ್ ವೈರಸ್ ಸೋಂಕು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಈ ಆದೇಶ ಹೊರಡಿಸಿದ್ದಾರೆ. ಮಂಗಳೂರಿನ ಆಸುಪಾಸಿನ ಸೋಮೇಶ್ವರ, ಉಳ್ಳಾಲ, ತಣ್ಣೀರುಬಾವಿ, ಪಣಂಬೂರು, ಸಸಿಹಿತ್ಲು ಸೇರಿದಂತೆ ಎಲ್ಲ ಕಡಲ ತೀರಗಳನ್ನು ಸ್ಥಳೀಯ ಮೀನುಗಾರರು ಹೊರತುಪಡಿಸಿ ಇತರೇ ಸಾರ್ವಜನಿಕರು ಭೇಟಿ ನೀಡದಂತೆ ನಿಷೇಧ ವಿಧಿಸಲಾಗಿದೆ.
ಬ್ರಿಟನ್ ದೇಶದಿಂದ ರಾಜ್ಯಕ್ಕೆ ಆಗಮಿಸಿದವರಲ್ಲಿ ಸೋಂಕು ಕಂಡುಬಂದಿರುವ ಕಾರಣ ಈ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.