ಪುತ್ತೂರು : ಹನುಮಗಿರಿ ಮೇಳದ ತಿರುಗಾಟದ ಪ್ರಥಮ ಸೇವೆಯಾಟ – ಸಭಾಕಾರ್ಯಕ್ರಮ - News Ubaar

ಇತ್ತೀಚಿನ ಸುದ್ದಿ

Subscribe

ಸೋಮವಾರ, ಡಿಸೆಂಬರ್ 28, 2020

ಪುತ್ತೂರು : ಹನುಮಗಿರಿ ಮೇಳದ ತಿರುಗಾಟದ ಪ್ರಥಮ ಸೇವೆಯಾಟ – ಸಭಾಕಾರ್ಯಕ್ರಮ

ನ್ಯೂಸ್ ಉಪ್ಪಿನಂಗಡಿ
ಉಪ್ಪಿನಂಗಡಿ: ಡಿ.28,ಪುತ್ತೂರು: ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಹನುಮಗಿರಿ ಮೇಳ ಇದರ 4 ನೇ ವರ್ಷದ ತಿರುಗಾಟದ ಪ್ರಥಮ ಸೇವೆಯಾಟ ಡಿ.28ರಂದು ಸಂಜೆಯಿಂದ ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ನಡೆಯುತ್ತಿದೆ.

ಶ್ರೀಮದ್ ಶಂಕರಾಚಾರ್ಯ ತೋಟಕಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪ ಬೆಳಗಿಸಿ ಸಭಾಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಲಿದರು.

ಹೈಕೋರ್ಟಿನ ಹಿರಿಯ ವಕೀಲರಾದ ಮಾಣಿ ಸುಧಾಕರ ಪೈಯವರಿಗೆ ಈ ಸಂದರ್ಭದಲ್ಲಿ ಗೌರವಾರ್ಪಣೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಹಕಾರಿ ಎಸ್.ಬಿ. ಜಯರಾಮ ರೈ ಬಳಜ್ಜ ವಹಿಸಿ, ಶುಭ ಹಾರೈಸಿದರು.

ವಿಶೇಷ ಅತಿಥಿಯಾಗಿ ಹೈಕೋರ್ಟ್ ವಕೀಲ ವಿಘ್ನೇಶ್ವರ ಯು ಭಾಗವಹಿಸಿ ಶುಭ ಹಾರೈಸಿದರು.

ಹಿರಣ್ಯ ವೆಂಕಟೇಶ್ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀ ಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ಸ್ವಾಗತಿಸಿದರು.

Pages